| 1 | Opening Date for Online Registration / ಆನ್‌ಲೈನ್ ನೊಂದಣಿ ಆರಂಭಿಕ ದಿನಾಂಕ | ||
|---|---|---|---|
| 2 | Closing date for Online Application / ಆನ್‌ಲೈನ್ ನೋಂದಣಿಗೆ ಮುಕ್ತಾಯ ದಿನಾಂಕ | ||
| 3 | Circular / ಸುತ್ತೋಲೆ | ||
1. ನೌಕರರು ವರ್ಗಾವಣೆ ಅರ್ಜಿ ಸಲ್ಲಿಸಿದ ಮಾತ್ರಕ್ಕೆ ವರ್ಗಾವಣೆಗೆ ಹಕ್ಕು ಹೊಂದಿರುವುದಿಲ್ಲ.
2. ಸಾರ್ವತ್ರಿಕ ವರ್ಗಾವಣೆ ( ಅಂತರ ನಿಗಮ ) ಗೆ ಅರ್ಜಿ ಸಲ್ಲಿಸಲು ಇಚ್ಚಿಸುವವರು ಖಾಯಂ ನೌಕರರಾಗಿರತಕ್ಕದ್ದು, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನಿಗಮದಲ್ಲಿ ಕನಿಷ್ಠ 10 ವರ್ಷ (ಪರೀಕ್ಷಾರ್ಥ ದಿನಾಂಕದಿಂದ) ಕರ್ತವ್ಯ ನಿರ್ವಹಿಸಿರಬೇಕು. (ಪತಿ/ಪತ್ನಿ , ಶೇಕಡ 40ಕ್ಕಿಂತ ಹೆಚ್ಚಿನ ಅಂಗವಿಕಲತೆ/ ತೀವ್ರ ಅನಾರೋಗ್ಯ ಹಾಗೂ ಪರಸ್ಪರ ವರ್ಗಾವಣೆ ಹೊರತುಪಡಿಸಿ)
3. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ (ನಡತೆ ಮತ್ತು ಶಿಸ್ತು) ನಿಯಮಾವಳಿಗಳು 1971 ರ ನಿಯಮಾವಳಿ 23 ರಡಿಯಲ್ಲಿ ಶಿಸ್ತು ಪ್ರಕರಣಗಳು ಬಾಕಿ ಇದ್ದಲ್ಲಿ, ಅಂತಹ ನೌಕರರು ವರ್ಗಾವಣೆಗೆ ಅರ್ಹರಾಗುವುದಿಲ್ಲ.
4. ವರ್ಗಾವಣೆಯನ್ನು ಒಂದು ನಿಗಮದಿಂದ ಮತ್ತೊಂದು ನಿಗಮಕ್ಕೆ ಮಾತ್ರ ಕಲ್ಪಿಸಲಾಗಿದ್ದು, ನೌಕರರು ನಿಗಮವನ್ನು ಮಾತ್ರ ಕೋರಿ ವರ್ಗಾವಣೆ ಅರ್ಜಿ ಸಲ್ಲಿಸುವುದು. ನಿಗಮಕ್ಕೆ ವರ್ಗಾವಣೆಯಾದ ನಂತರ ಆಯಾ ನಿಗಮಗಳು ಅವಶ್ಯಕತೆಗೆ ಅನುಗುಣವಾಗಿ ವಿಭಾಗಗಳಿಗೆ ನಿಯೋಜಿಸುತ್ತವೆ.
5. ನೌಕರರ ಅಂತರ ನಿಗಮ ವರ್ಗಾವಣೆಯು ಶಾಶ್ವತ ವ್ಯವಸ್ಥೆಯಾಗಿದ್ದು, ಒಂದು ಬಾರಿ ವರ್ಗಾವಣೆ ಆದೇಶ ಹೊರಡಿಸಿದ ನಂತರ ಯಾವುದೇ ಕಾರಣಕ್ಕೂ ವರ್ಗಾವಣೆಯನ್ನು ಹಿಂಪಡೆಯಲು /ಬದಲಾಯಿಸಲು ಅವಕಾಶವಿರುವುದಿಲ್ಲ.
6. ವರ್ಗಾವಣೆಗೊಂಡ ನೌಕರರನ್ನು ವರ್ಗಾವಣೆಗೊಂಡ ನಿಗಮದಲ್ಲಿ ಶಾಶ್ವತವಾಗಿ ಸೇವೆಯಲ್ಲಿ ವಿಲೀನಗೊಳಿಸಲಾಗುವುದು. ತತ್ಸಂಬಂದ, ನೌಕರರು ಇಚ್ಚಾಪತ್ರ/ಒಪ್ಪಿಗೆಪತ್ರ ಸಲ್ಲಿಸತಕ್ಕದ್ದು. (ಅನುಬಂಧ ‘ಅ’ ಮತ್ತು ‘ಆ’)
7. ಈ ಹಿಂದೆ ಅಂತರ ನಿಗಮ ವರ್ಗಾವಣೆ ಅವಕಾಶದಡಿಯಲ್ಲಿ ವರ್ಗಾವಣೆಗೊಂಡಿರುವ ನೌಕರರು ವರ್ಗಾವಣೆ ಅರ್ಜಿ ಸಲ್ಲಿಸಲು ಅರ್ಹರಲ್ಲ.
8. ವರ್ಗಾವಣೆ ಬಯಸುವ ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ನೌಕರರು ಆನ್ ಲೈನ್ ಅರ್ಜಿ ಭರ್ತಿ ಮಾಡಲು ಅರ್ಹತಾ ಮಾನದಂಡಗಳು ಹಾಗೂ ಇತರೆ ಅವಶ್ಯಕತೆಗಳನ್ನು ತಿಳಿಯಲು ಸುತ್ತೋಲೆ ಮತ್ತು ಆನ್ ಲೈನ್ ಅರ್ಜಿ ಭರ್ತಿ ಮಾಡುವ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಅರ್ಥ ಮಾಡಿಕೊಂಡು ಅರ್ಜಿ ಸಲ್ಲಿಸತಕ್ಕದ್ದು.
9. ಆನ್ ಲೈನ್ ಮುಖಾಂತರ ಸಲ್ಲಿಸಲಾದ ಅರ್ಜಿಯು ಸುತ್ತೋಲೆಯಲ್ಲಿ ನೀಡಲಾದ ಎಲ್ಲಾ ಮಾನದಂಡಗಳನ್ನು ಪೂರೈಸಿದೆ ಎಂದು ಭಾವಿಸಬಾರದು. ಅರ್ಜಿಯು ನಂತರದ ಪರಿಶೀಲನೆಗೆ ಒಳಪಟ್ಟಿರುತ್ತದೆ. ಯಾವುದೇ ಸಂದರ್ಭದಲ್ಲಿ ಅನರ್ಹರೆಂದು ಕಂಡು ಬಂದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುವುದು.
10. ಹಂತ ಹಂತವಾಗಿ ಅರ್ಜಿಯ ಎಲ್ಲಾ ವಿವರಗಳನ್ನು ಭರ್ತಿ ಮಾಡುವುದು.
11. ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಮತ್ತೆ ಬದಲಾವಣೆ ಮಾಡಲು ಅವಕಾಶವಿರುವಿದಿಲ್ಲ.
12. ವರ್ಗಾವಣೆಯ ಸುತ್ತೋಲೆಯಲ್ಲಿ ತಿಳಿಸಿದಂತೆ ವಿನಾಯತಿ ಪ್ರಕರಣಗಳಿದ್ದಲ್ಲಿ ಸೂಕ್ತ ದಾಖಲಾತಿಗಳನ್ನು ಸುತೋಲೆಯಲ್ಲಿ ತಿಳಿಸಿದ ಕೊನೆಯ ದಿನಾಂಕದೊಳಗೆ ಆಯಾ ಆಡಳಿತಾಧಿಕಾರಿಗಳಿಗೆ ಸಲ್ಲಿಸುವುದು.
13. ಅರ್ಜಿ ಭರ್ತಿ ಮಾಡಿದ ನಂತರದಲ್ಲಿ ಆಡಳಿತಾಧಿಕಾರಿಗಳಿಂದ ಅರ್ಜಿ ಪರಿಶೀಲನೆಯಾದ ಬಳಿಕ ನಿಮ್ಮ ಅರ್ಜಿಯು ಸ್ವೀಕೃತವಾಗಿದೆಯೇ /ತಿರಸ್ಕೃತವಾಗಿದೆಯೇ ಎಂಬುದರ ಕುರಿತು ಎಸ್ಎಂಎಸ್ ಕಳುಹಿಸಲಾಗುವುದು.
14. ಭರ್ತಿ ಮಾಡಿದ ಅರ್ಜಿಯನ್ನು ದ್ವಿಪ್ರತಿಯಲ್ಲಿ ಮುದ್ರಿಸಿ ನಿಮ್ಮ ವಿಭಾಗ/ಕಛೇರಿಯ ಆಡಳಿತಾಧಿಕಾರಿಯವರಿಗೆ ಅಗತ್ಯವಿರುವ ದಾಖಲಾತಿಗಳನ್ನು ಸಲ್ಲಿಸಿ ಸ್ವೀಕೃತಿಯನ್ನು ಪಡೆಯುವುದು.
15.ಪರಸ್ಪರ ಮತ್ತು ಸಾಮಾನ್ಯ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು, ಪ್ರತ್ಯೇಕ ಅರ್ಜಿ ಸಲ್ಲಿಸುವುದು.
16. ಪರಸ್ಪರ ವರ್ಗಾವಣೆಗೆ ಪರಸ್ಪರ ನೌಕರರ ಮೂಲ ವೇತನ ಹಾಗೂ ತುಟ್ಟಿ ಭತ್ಯೆ ಶೇ 15 ರಷ್ಟು ವ್ಯತ್ಯಾಸವನ್ನು ಪರಿಗಣಿಸಲಾಗುವುದು.