1. ಈ ಅರ್ಜಿಯಲ್ಲಿ ನೀಡಿದ ಮಾಹಿತಿ ಮತ್ತು ವಿವರಗಳು ಸತ್ಯವಾಗಿರುತ್ತವೆ ಎಂದು ಪ್ರಮಾಣಿಕರಿಸುತ್ತೇನೆ. ಒಂದು ವೇಳೆ ಅವು ಅಸತ್ಯವೆಂದು ಕಂಡು ಬಂದಲ್ಲಿ ನನ್ನ ಅಭ್ಯರ್ಥಿತನವನ್ನು ರದ್ದುಪಡಿಸಬಹುದು ಎಂದು ಈ ಮೂಲಕ ಘೋಷಿಸುತ್ತೇನೆ. 2. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ದರ್ಜೆ-3 ಮೇಲ್ವಿಚಾರಕೇತರ ಹಾಗೂ ದರ್ಜೆ-4 ನೌಕರರ ಅಂತರ ನಿಗಮ ವರ್ಗಾವಣೆಗೊಳ್ಳುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಜಾರಿಯಲ್ಲಿರುವ ನೌಕರರ ಸೇವಾ ಜ್ಯೇಷ್ಠತೆಯನ್ನು ನಿಗಧಿಪಡಿಸುವ ರೀತಿಯಲ್ಲಿಯೇ ಈ ಅಂತರ ನಿಗಮ ವರ್ಗಾವಣೆ ಪ್ರಕರಣದಲ್ಲಿಯೂ ಸಹ ನನ್ನ ಸೇವಾ ಜ್ಯೇಷ್ಠತೆಯನ್ನು ವರ್ಗಾವಣೆಗೊಂಡ ನಿಗಮದಲ್ಲಿ ನನ್ನ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಜ್ಯೇಷ್ಠತಾ ಪಟ್ಟಿಯ ಕೊನೆಯಲ್ಲಿ ನಿಗಧಿಪಡಿಸಲು ಈ ಮೂಲಕ ಒಪ್ಪಿಗೆ ನೀಡಿರುತ್ತೇನೆ ಹಾಗೂ ಆಯಾ ನಿಗಮದಲ್ಲಿ ಹೊರಡಿಸುವ ಜ್ಯೇಷ್ಠತೆ ಪಟ್ಟಿಯಲ್ಲಿ ಮತ್ತು ಚಾಲ್ತಿಯಲ್ಲಿರುವ ಅಥವಾ ಮುಂದಿನ ಕಾಲಕಾಲಕ್ಕೆ ರೂಪಿಸಬಹುದಾದ ನಿಯಮ, ಮಾರ್ಗಸೂಚಿ, ಸೂಕ್ತ ಪ್ರಾಧಿಕಾರದ ಇತರೆ ನಿರ್ಧಾರ ಹಾಗೂ ಇತ್ಯಾಧಿಗಳಿಗೆ ಬದ್ಧನಾಗಿರುತ್ತೇನೆ. 3. ಮೇಲಿನಂತೆ ಪರಸ್ಪರ ವರ್ಗಾವಣೆಯಾಗಲು ಸ್ವ ಇಚ್ಚೆಯಿಂದ ಇಬ್ಬರೂ ಒಪ್ಪಿರುತ್ತೇವೆ. 4. ಅರ್ಜಿಯಲ್ಲಿ ಭರ್ತಿಮಾಡಿರುವ ಮಾಹಿತಿಯನ್ನು ಪರಿಶೀಲಿಸಿ ಮಾಹಿತಿಗಳು ಸರಿಯಾಗಿದೆಯೆಂದು ಖಚಿತ ಪಡಿಸಿಕೊಂಡ ನಂತರ ಚೆಕ್ ಬಾಕ್ಸ್ ಕ್ಲಿಕ್ಕಿಸಿ ಅರ್ಜಿ ಸಲ್ಲಿಸುವುದು.